ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು

ಕೃಷ್ಣ ರಾಜೇಂದ್ರ ರಸ್ತೆ, ವಿ ವಿ ಪುರಂ,
ಬೆಂಗಳೂರು, ಕರ್ನಾಟಕ 560004ಪ್ರವೇಶ ಅರ್ಜಿ ನಮೂನೆ
ಸಾರ್ವಜನಿಕ ಸೂಚನೆ

ಸಂಕ್ಷಿಪ್ತ ಪರಿಚಯ

ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು, ಬೆಂಗಳೂರು ನಗರದ ಹೃದಯ ಭಾಗದ ವಿಶ್ವೇಶ್ವರಪುರಂ ಬಡಾವಣೆಯಲ್ಲಿದ್ದು, ಇಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ಬಿ.ಎ ಮತ್ತು ಬಿ.ಕಾಂ ಪದವಿ ಶಿಕ್ಷಣ ವನ್ನು ಬೋಧಿಸಲಾಗುತ್ತದೆ. ಈ ಕಾಲೇಜು ಮೊದಲಿನ “ ಬೆಂಗಳೂರು ವಿಶ್ವವಿದ್ಯಾನಿಲಯ “ ಮತ್ತು ಹಾಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಮಾನ್ಯತೆಗೆ ಒಳಪಟ್ಟಿರುವಂತಹ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಯಾಗಿದೆ.

ಕಾಲೇಜಿನ ಹಿನ್ನಲೆ

ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು “ ರಾಜ್ಯ ಒಕ್ಕಲಿಗರ ಸಂಘ “ ದಿಂದ ನಡೆಸಲಾಗುತ್ತಿರುವ ಅನೇಕ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ರಾಜ್ಯ ಒಕ್ಕಲಿಗರ ಸಂಘ 1966 ನೇ ಇಸವಿಯಲ್ಲಿ ಸ್ಥಾಪಿಸಿದ ಪ್ರಪ್ರಥಮ ಸಂಸ್ಥೆಯಾಗಿದ್ದು ನಂತರ ಸ್ಥಾಪಿಸಲಾದ ಎಲ್ಲ ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾಗಿದೆ.
ಎಪ್ಪತ್ತು ಹಾಗೂ ಎಂಭತ್ತರ ದಶಕದಲ್ಲಿ ಬೆಂಗಳೂರು ನಗರಕ್ಕೆ ಶಿಕ್ಷಣ ಹಾಗೂ ಜೀವನ ಮಾರ್ಗದ ಅನ್ವೇóಣೆಯಲ್ಲಿ ಬಂದ ಯುವಜನತೆಯ ಮಾರ್ಗದರ್ಶನ ಹಾಗೂ ಶಿಕ್ಷಣಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಪ್ರಾರಂಭಿಸಿದ ಹಂತದಲ್ಲಿ ಬಿ.ಎಸ್.ಸಿ. ವಿಜ್ಞಾನ ಪದವಿಯನ್ನು ಸಹ ಒಳಗೊಂಡಿತ್ತು. ನಂತರದ ದಿನಗಳಲ್ಲಿ ವಿಜ್ಞಾನ ಶಿಕ್ಷಣವನ್ನು ಪ್ರತ್ಯೇಕ ಮೂಲಭೂತ ಸೌಕರ್ಯವನ್ನೊಳಗೊಂಡ ವಿಶಾಲವಾದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಹೀಗಾಗಿ ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜು ಎರಡು ಸಂಸ್ಥೆಗಳಾಗಿ ಪ್ರತ್ಯೇಕ ಶಿಕ್ಷಣ ಸೇವಾ ಕೇಂದ್ರಗಳಾಗಿ ಆರು ದಶಕಗಳ ದೀರ್ಘ ಸೇವೆಯನ್ನು ಸಲ್ಲಿಸಿವೆ. ಈ ಸಂಸ್ಥೆಯು ಹತ್ತಾರು ಸಾವಿರ ಯುವಕ ಯುವತಿಯ ಜೀವನದಲ್ಲಿ ಅರಿವನ್ನು ಆತ್ಮ ವಿಶ್ವಾಸವನ್ನು ಮೂಡಿಸಿ ಬೃಹತ್ ಭಾರತದ ಅಬಿವೃದ್ದಿಯ ಹಾದಿಯಲ್ಲಿ ತನ್ನ ಸೇವೆಯನ್ನು ಸಲ್ಲಿಸಿರುವ ಹೆಮ್ಮೆಯನ್ನು ಹೊಂದಿದೆ.

ಆಡಳಿತ ಮಂಡಳಿ

ಕರ್ನಾಟಕ ಹಾಗೂ ಭಾರತದ ಅಭಿವೃದ್ದಿಯಲ್ಲಿ ಮಹತ್ವ ಪಾತ್ರವನ್ನು ಹೊಂದಿರುವ ಒಕ್ಕಲಿಗರ ಜನಾಂಗದಿಂದ 1906 ರಲ್ಲಿ ಸ್ಥಾಪಿತವಾದ ಒಕ್ಕಲಿಗರ ಸಂಘವು, ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜನ್ನು ಸ್ಥಾಪನೆಯನ್ನು ಮಾಡಿದ ನಂತರ, ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. ಕಾನೂನು ಶುಶ್ರೂಷೆ, ವೃತ್ತಿ ಪರ ಶಿಕ್ಷಣ, ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಸಾಮಾಜಿಕ ಕಾಳಜಿಯನ್ನು ಮೆರೆದಿದೆ.

ಶಿಕ್ಷಣ ಸೌಲಭ್ಯಗಳು

ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಬಿ.ಎ., ಮತ್ತು ಬಿ.ಕಾಂ ಪದವಿ ತರಗತಿಗಳಿಗೆ ಶಿಕ್ಷಣ ಲಭ್ಯವಿದೆ. ಆರು ಸೆಮಿಸ್ಟರ್‍ಗಳ ಮೂರು ವರ್ಷದ ಸಿ.ಬಿ.ಸಿ.ಎಸ್. ವಿಧಾನದ ಬಿ.ಎ ಮತ್ತು ಬಿ.ಕಾಂ ಕೋರ್ಸುಗಳು ಲಭ್ಯವಿರುತ್ತವೆ. ಎನ್.ಎಸ್.ಎಸ್. , ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಸಲ್ಪಡುತ್ತವೆ.

ಮೂಲಭೂತ ಸೌಕರ್ಯಗಳು

ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ನಗರದ ಮುಖ್ಯ ಭಾಗವಾದ ಕೆ.ಆರ್.ರಸ್ತೆಯಲ್ಲಿ ವಿಶಾಲವಾದ ಕಟ್ಟಡದಲ್ಲಿ 1966 ರಿಂದ ಕಾರ್ಯ ನಿರ್ವಹಿಸುತ್ತಿದೆ. ಅನುಕೂಲಕರವಾದ ಪೀಠೋಪಕರಣದಿಂದ ಕೂಡಿದ ಉಪನ್ಯಾಸ ಕೊಠಡಿಗಳು, ಸಭಾಂಗಣ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಶೌಚಾಲಯಗಳು, ಮಹಿಳೆಯರಿಗೆ ಪ್ರತ್ಯೇಕ ರೆಸ್ಟ್ ರೂಂ, ಕ್ರೀಡಾ ಉಪಕರಣಗಳು. ಐ.ಸಿ.ಟಿ. ಉಪಕರಣಗಳು ಕಾಲೇಜಿನಲ್ಲಿ ಲಭ್ಯವಿದೆ. ಕಾಲೇಜು ಸಿ.ಟಿ. ಬಸ್‍ಗಳು ಮೆಟ್ರೋ ಟ್ರೈನ್ ನ ಸಂಪರ್ಕ ತೀರ ಸನಿಹದಲ್ಲಿದೆ. ತರಗತಿ ಬೆಳಿಗ್ಗೆ 9 ರಿಂದ ಪ್ರಾರಂಭವಾಗಿ 3.30 ಕ್ಕೆ ಬಹುತೇಕ ಮುಗಿಯುವುದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಮ್ಮ ತಮ್ಮ ಮನೆಗಳಿಗೆ ತಲುಪಲು ಅನುಕೂಲಕರವಾಗಿದೆ.
ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಇನ್ನೊಂದು ವಿಶೇಷತೆ ಏನೆಂದರೆ ಅತಿ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವುದಾಗಿದೆ.. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗದ ಮಕ್ಕಳಿಗಾಗಿ ಕಾಲೇಜಿನ ಶುಲ್ಕ ವನ್ನು ಬೇರೆ ಖಾಸಗಿ ಕಾಲೇಜುಗಳಿಗಿಂತ ಅತಿ ಕಡಿಮೆ ಮಟ್ಟದಲ್ಲಿ ಇರಿಸಲಾಗಿದೆ. ಇದರಿಂದ ಆರ್ಥಿಕವಾಗಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ಭಾರವಾಗದಂತೆ ಆಡಳಿತ ಮಂಡಳಿ ಎಚ್ಚರ ವಹಿಸಿದೆ.
2017 ರ ಆಗಸ್ಟ್ ತಿಂಗಳಿನಿಂದ ಡಾ: ಸಿ.ಎಂ. ಈಶ್ವರ ರೆಡ್ಡಿಯವರು ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡು ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಅಭಿವೃದ್ದಿಗಾಗಿ ವಿಶೇಷ ಆಸಕ್ತಿಯನ್ನು ಹೊಂದಿರುವರಾಗಿದ್ದಾರೆ. ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಉಪನ್ಯಾಸಕರುಗಳು ಎಲ್ಲರೂ ಪೂರ್ಣಕಾಲಿಕ ಉಪನ್ಯಾಸಕರುಗಳಾಗಿದ್ದು ಎರಡು ಮೂರು ದಶಕದಷ್ಟು ಅನುಭವ ಉಳ್ಳವರಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ಉಪನ್ಯಾಸಕರು ಪಿಎಚ್.ಡಿ. ಪದವಿಯನ್ನು ಹೊಂದಿದವರಾಗಿ ಅತ್ಯುತ್ತಮ ಶಿಕ್ಷಣ ಒದಗಿಸುವುದರಲ್ಲಿ ನಿರತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರವೇಶಾತಿಯೂ ಹೆಚ್ಚಿದ್ದು ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸೇವೆಯನ್ನು ಸಲ್ಲಿಸಲು ಸನ್ನದ್ಧವಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಮತ್ತು ಹಿಂದುಳಿದ ಹಾಗೂ ಇತರ ಸಮುದಾಯದವರಿಗೆ ವಿದ್ಯಾಸಿರಿ ಮತ್ತು ಸಮುದಾಯದ ವತಿಯಿಂದ ವಿದ್ಯಾರ್ಥಿ ವೇತನದ ಸಹಾಯ ಲಭ್ಯವಿದೆ.


© 2021 ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು . ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Developed By: Deemsoft