ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು

ಕೃಷ್ಣ ರಾಜೇಂದ್ರ ರಸ್ತೆ, ವಿ ವಿ ಪುರಂ,
ಬೆಂಗಳೂರು, ಕರ್ನಾಟಕ 560004


ಸಂಸ್ಥೆಯ ಮುಖ್ಯಸ್ಥರು :


ಡಾ: ಸಿ.ಎಂ.ಈಶ್ವರರೆಡ್ಡಿ

ಡಾ: ಸಿ.ಎಂ.ಈಶ್ವರರೆಡ್ಡಿ, ಸೆಪ್ಟೆಂಬರ್ ೨೦೧೬ ರಿಂದ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ. ಇವರು ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಕೇಡರ್‌ನಲ್ಲಿರುವ ಒಬ್ಬ ನಿಷ್ಠಾವಂತ ದಕ್ಷ ಅಧಿಕಾರಿಯಾಗಿದ್ದು ಕಾಮರ್ಸ ವಿಭಾಗದಲ್ಲಿ ೨೫ ವರ್ಷಗಳಿಗೂ ಮೀರಿ ಸೇವೆ ಸಲ್ಲಿಸಿರುತ್ತಾರೆ. ಶ್ರೀಯುತರು ಡಾಕ್ಟರೇಟ್ ಪದವಿಯನ್ನು ಹೊಂದಿದ್ದು ಕುಪ್ಪಂ ದ್ರವಿಡಿಯನ್ ಯೂನಿವರ್ಸಿಟಿ ಯಿಂದ ಮಾನ್ಯತೆ ಪಡೆದು ಪಿಹೆಚ್.ಡಿ ಪದವಿಗೆ ಮಾರ್ಗದರ್ಶಕರಾಗಿರುತ್ತಾರೆ. ಇವರ ದಕ್ಷತೆ ಮತ್ತು ನಿಷ್ಟೆಯನ್ನು ಪರಿಗಣಿಸಿ ಮಾನ್ಯ ರಾಜ್ಯ ಒಕ್ಕಲಿಗರ ಸಂಘವು ಪ್ರಾಚಾರ್ಯರನ್ನಾಗಿ ನಿಯಮಿಸಿರುತ್ತದೆ.

ಪ್ರಾಚಾರ್ಯರ ಸಂದೇಶ :

ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು, ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಂತಹ, ರಾಜ್ಯ ಒಕ್ಕಲಿಗರ ಸಂಘ ನಡೆಸುತ್ತಿರುವ ಒಂದು ಉನ್ನತ ಶಿಕ್ಷಣ ಸಂಸ್ಥೆಯಾಗಿದೆ. ಕಾಲೇಜು ಶಿಕ್ಷಣ ಇಲಾಖೆಯಿಂದ ಅನುದಾನಿತ ಸಂಸ್ಥೆಯಾಗಿಒದ್ದು ಅರವತ್ತು ವರ್ಷಗಳ ಉಜ್ಜಲ ಇತಿಹಾಸವನ್ನು ಹೊಂದಿದೆ. ಬೆಂಗಳೂರಿನ ಸುತ್ತ ಮುತ್ತಲ ಗ್ರಾಮೀಣ ಪ್ರದೇಶದ ರೈತ ಕುಟುಂಬದ ಮಕ್ಕಳು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರ ಶಿಕ್ಷಣ ಮತ್ತು ಏಳಿಗೆಗಾಗಿ ಪ್ರಾರಂಭವಾದ ನಮ್ಮ ಸಂಸ್ಥೆಯು ಉತ್ತಮ ನುರಿತ ಶಿಕ್ಷಕರು, ಉತ್ತಮ ಮೂಲಭೂತ ಸೌಕರ್ಯ ಹಾಗು ಕಡಿಮೆ ಶುಲ್ಕವನ್ನು ಹೊಂದಿದ್ದು ಬೆಂಗಳೂರು ನಗರದ ಒಂದು ಅಮೂಲ್ಯ ಶಿಕ್ಷಣ ಕೇಂದ್ರವಾಗಿದೆ.
ನಮ್ಮ ಸಂಸ್ಥೆಯು ೦೬ ಸೆಮಿಸ್ಟರ್‌ಗಳ ಮೂರ ವರ್ಷಗಳ ಬಿಎ ಮತ್ತು ಬಿ.ಕಾಂ ಕೋರ್ಸುಗಳನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವೃತ್ತಿ ಪರ ಅಧ್ಯಯನಕ್ಕೆ ದಾರಿ ದೀಪವಾಗಿದೆ. ಇಲ್ಲಿ ನುರಿತ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳ ಏಳಿಗೆಗೆ ಶ್ರಮ ವಹಿಸುವಲ್ಲಿ ನಿರತರಾಗಿದ್ದು, ಸಮಾಜದ ಎಲ್ಲಾ ವರ್ಗಗಳಿಗೂ ವಿದ್ಯಾಬ್ಯಾಸದ ಲಾಭ ದೊರೆಯುವಂತೆ ಮಾಡಲು ಶ್ರಮಿಸುತ್ತಿದ್ದಾರೆ.
ನಮ್ಮ ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಮಾಡಿಸುತ್ತಾ, ಉತ್ತಮ ಶಿಕ್ಷಣವನ್ನು ಕೊಟ್ಟ ಸಮಾಜದ ಎಲ್ಲಾ ವರ್ಗಗಳ ಏಳಿಗೆಗೆ ಅದರ ಮೂಲಕ ದೇಶದ ಏಳಿಗೆಗೆ ಶ್ರಮಿಸುತ್ತಿದೆ. ನಮ್ಮ ಸಂಸ್ಥೆಯು ಸಮಾನತೆ, ನ್ಯಾಯ, ಮಹಿಳೆಯರ ಸಮಾನತೆ ಸಮಾನ ಅವಕಾಶಗಳ ತತ್ವಗಳಿಗೆ ಬದ್ದವಾಗಿದೆ. ಈ ಮೂಲ ಎಲ್ಲ ಪ್ರಸಕ್ತ ಹಾಗೂ ಮುಂಬರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮತ್ತು ಉತ್ತಮ ಮೌಲ್ಯಗಳಿಂದೊಡಗೂಡಿದ ಭವಿಷ್ಯದ ಜೀವನವನ್ನು ಹಾರೈಸುತ್ತೇನೆ.

© 2021 ವಿಶ್ವೇಶ್ವರಪುರ ಕಲಾ ಮತ್ತು ವಾಣಿಜ್ಯ ಕಾಲೇಜು . ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Developed By: Deemsoft